“ಜ್ಞಾನವು ತೋಟದಂತೆ; ಅದನ್ನು ಬೆಳೆಸದೆ ಹೋದರೆ ಫಲವನ್ನು ಪಡೆಯಲಾಗದು.”
ಕನ್ನಡ ಮಾಧ್ಯಮ ಶಾಲೆಗಳು ದತ್ತು ಯೋಜನೆಯಡಿ (ಶೈಕ್ಷಣಿಕ ಮತ್ತು ಸಾಂಸ್ಕೃತಿಕ) “ಉತ್ತಮ ನಾಳೆಯನ್ನು ರೂಪಿಸುವುದು” ಎಂಬ ಚಿಹ್ನೆಯೊಂದಿಗೆ ನಡೆಯುತ್ತಿವೆ.
"ಮೌಲ್ಯಮಯ ಶಿಕ್ಷಣ ನೀಡುವ, ಯುವಜನರನ್ನು ಸಾಂಸ್ಕೃತಿಕ ಮೌಲ್ಯಗಳು ಮತ್ತು ದೇಶಭಕ್ತಿಯ ಮೇಲೆ ನೆಲಸಿಸುವ ಧ್ಯೇಯವನ್ನು ಶಿಕ್ಷಣ ಸಂಸ್ಥೆಯ ಬಹುಮಾಹಿತಿ ಚಟುವಟಿಕೆಗಳ ಮೂಲಕ ಸಾಧಿಸಲಾಗಿದೆ."
ಮುಖ್ಯೋಪಾಧ್ಯಾಯರ ನುಡಿ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯು (ರಾಜ್ಯಪಠ್ಯಕ್ರಮ) ಕಳೆದ ಹದಿನೈದು ವರ್ಷಗಳಿಂದ ಅತ್ಯುತ್ತಮ ಸಾಧನೆಗೈಯುತ್ತಿದ್ದು, ಶಾಲೆ ಪ್ರಾರಂಭವಾಗಿ 15 ವರ್ಷಗಳಾಗಿದ್ದು ಇಂದಿನವರೆಗೂ ನಿರಂತರವಾಗಿ ಶೇ 100% ಅತ್ಯುತ್ತಮ ಫಲಿತಾಂಶ ದಾಖಲಿಸುತ್ತಾ ರಾಜ್ಯ ಶೈಕ್ಷಣಿಕ ಮೌಲ್ಯಂಕನ ಮಂಡಳಿಯಿಂದ ರಾಜ್ಯದ “ಅತ್ಯುನ್ನತ ಶಾಲೆ” ಎಂಬ ಮಾನ್ಯತೆ ಪಡೆದಿದೆ ಎಂಬುದನ್ನು ತಿಳಿಸಲು ಅಭಿಮಾನ ಹಾಗೂ ಹೆಮ್ಮೆ ಪಡುತ್ತೇನೆ. ಪ್ರಾರಂಭದ ದಿನಗಳಲ್ಲಿ 60 ಮಕ್ಕಳು ಮತ್ತು 7 ಶಿಕ್ಷಕರಿಂದ ಆರಂಭವಾದ ನಮ್ಮ ಶಾಲೆ ಪ್ರಸ್ತುತ 243 ಮಕ್ಕಳು ಮತ್ತು 13 ಶಿಕ್ಷಕರು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಸಂಸ್ಥೆಯ ಅಧ್ಯಕ್ಷರಾದ ಗೌರವಾನ್ವಿತ ಡಾ|| ಎಂ. ಮೋಹನ್ ಅಳ್ವ ಅವರ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಬೆಂಬಲದೊಂದಿಗೆ ಶಿಕ್ಷಕರ ಕಠಿಣ ಪರಿಶ್ರಮ, ಸಮರ್ಪಣಾಭಾವದಿಂದ ಶಾಲೆಯು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುತ್ತಿದೆ.
ಶಿಕ್ಷಣದ ಜೊತೆ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರತೀ ವರ್ಷವೂ ಕೂಡ ವಿದ್ಯಾರ್ಥಿಗಳ ಸಾಧನೆ ಅನನ್ಯವಾದದ್ದು. ರಾಜ್ಯಮಟ್ಟದ ಪ್ರತಿಭಾ ಕಾರಂಜಿ, ನಾಟಕ, ಕವ್ಹಾಲಿ ಸ್ಪರ್ಧೆಯಲ್ಲಿ ವಿಜೇತರಾಗಿ ಶಾಲೆಯ ಗೌರವವನ್ನು ಇನ್ನಷ್ಟೂ ಹೆಚ್ಚಿಸಿದ್ದಾರೆ. ಸ್ಥಳೀಯ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಂಸ್ಥೆಯ ಹೆಸರು ಹಾಗೂ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಂಸ್ಥೆಯ ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ಸಾಧನೆಗಳನ್ನು ಪಟ್ಟಿ ತಯಾರಿಸಲು ಹೊರಟರೆ ಪುಸ್ತಕಗಳೇ ಸಾಕಾಗಬಹುದೇನೋ ಅನ್ನಿಸುವಂತಾಗುತ್ತದೆ.
ಎಲ್ಲೆಡೆ ಕನ್ನಡ ಭಾಷಾಭಿಮಾನವು ಪ್ರತಿನಿತ್ಯ ಮೊಳಗುತ್ತಿದ್ದರೂ, ಕರ್ನಾಟಕದಲ್ಲೇ ಕನ್ನಡ ಶಾಲೆಗಳು ಮುಚ್ಚುತ್ತಿರುವ, ವಿಲೀನಗೊಳ್ಳುತ್ತಿರುವ, ಇಂಗ್ಲೀಷ್ ಮಾಧ್ಯಮವಾಗಿ ಪರಿವರ್ತನೆಗೊಳ್ಳುತ್ತಿರುವ, ಕನ್ನಡ ನೆಲದಲ್ಲೇ ಕನ್ನಡ ಶಾಲೆಗಳು ಅಳಿವಿನಂಚಿನಲ್ಲಿರುವ ಕೊರಗಿನ ನಡುವೆಯೇ ಆಳ್ವಾಸ್‌ನ ಕನ್ನಡ ಮಾದರಿ ಶಾಲೆಯೊಂದು ರಾಜ್ಯದಲ್ಲೇ “ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆ” ಎಂಬ ಗರಿಮೆಗೆ ಪಾತ್ರವಾಗಿರುವುದು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದ್ದು, ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಲು ನಾನು ಬಯಸುತ್ತೇನೆ.| ವರ್ಷ | ಒಟ್ಟು ವಿದ್ಯಾರ್ಥಿಗಳು | 625 | 624 | 623 | 622 | 621 | 620 | 600 ಕ್ಕಿಂತ ಹೆಚ್ಚು | ಉನ್ನತ ಶ್ರೇಣಿ | ಪ್ರಥಮ ಶ್ರೇಣಿ | ದ್ವಿತೀಯ ಶ್ರೇಣಿ | ಉತ್ತೀರ್ಣ | ಶಾಲಾ ಶೇಕಡಾವಾರು |
|---|---|---|---|---|---|---|---|---|---|---|---|---|---|
| 2009-10 | 18 | - | - | - | - | - | - | - | 0 | 9 | 3 | 6 | 100% |
| 2010-11 | 19 | - | - | - | - | - | - | 1 | 1 | 14 | 2 | 2 | 100% |
| 2011-12 | 26 | - | - | - | - | - | - | 1 | 8 | 10 | 7 | 1 | 100% |
| 2012-13 | 56 | - | - | - | - | - | - | 2 | 37 | 16 | 3 | - | 100% |
| 2013-14 | 70 | - | - | - | - | - | - | 10 | 52 | 13 | 3 | 2 | 100% |
| 2014-15 | 92 | - | - | - | - | - | - | 8 | 75 | 17 | - | - | 100% |
| 2015-16 | 130 | - | - | - | - | - | - | 32 | 96 | 33 | 1 | - | 100% |
| 2016-17 | 132 | - | - | - | - | 1 | - | 36 | 97 | 32 | 3 | - | 100% |
| 2017-18 | 155 | - | - | - | - | 1 | - | 23 | 114 | 38 | 3 | - | 100% |
| 2018-19 | 157 | - | - | - | - | 1 | 2 | 56 | 140 | 17 | - | - | 100% |
| 2019-20 | 160 | - | - | - | 2 | 2 | 3 | 54 | 139 | 21 | - | - | 100% |
| 2020-21 | 160 | 1 | - | 5 | - | 5 | - | 105 | 147 | 13 | - | - | 100% |
| 2021-22 | 126 | 5 | 7 | 5 | 7 | 8 | - | 96 | 107 | 17 | 2 | - | 100% |
| 2022-23 | 107 | - | - | - | 1 | 1 | 2 | 48 | 95 | 9 | 3 | - | 100% |
| 2023-24 | 115 | - | - | - | - | - | - | 41 | 103 | 12 | - | - | 100% |
| 2024-25 | 117 | - | - | 1 | - | 3 | 5 | 67 | 104 | 13 | - | - | 100% |
1)Students with excellent performance in academics selected through entrance test. 2)Students with extremely good performance in cultural activities like musical instrument, classical dance, yakshagana, drama, mallakamba, yoga. 3)Students with sports background will be selected after the 10days of sports selection camp which will be tentatively held in the month of April-May of every year. 4)Socially backward students.
1)Separate hostel for boys and girls are given along with free food, accommodation and coaching.
2)Well organized playground with 400 mtrs synthetic track.
3)Separate coach for different events.
Materials
4)Special care taken even in academics.
This vendor is incompetent suite, nor this is not a video game, this is but drink the Kool-aid, yet sorry i was triple muted. Push back synergize productive mindfulness, thought shower, flesh that out note for the previous submit We have to leverage up the messaging
This vendor is incompetent suite, nor this is not a video game, this is but drink the Kool-aid, yet sorry i was triple muted. Push back synergize productive mindfulness, thought shower, flesh that out note for the previous submit We have to leverage up the messaging