⚠️ ಕನ್ನಡ ಮಾಧ್ಯಮ ಉಚಿತ ಶಿಕ್ಷಣ ಅರ್ಜಿ ಆಹ್ವಾನ ⚠️

ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಸ್ವಾಗತ

“ಜ್ಞಾನವು ತೋಟದಂತೆ; ಅದನ್ನು ಬೆಳೆಸದೆ ಹೋದರೆ ಫಲವನ್ನು ಪಡೆಯಲಾಗದು.”

ವಿದ್ಯೆ – ಬುದ್ಧಿಯ ಜೊತೆಗೆ ಸುಸಂಸ್ಕೃತ ಮನಸ್ಸನ್ನು ಬಾಲ್ಯದಲ್ಲಿಯೇ ಕಟ್ಟುವುದರ ಜೊತೆಗೆ ಸ್ಪರ್ಧಾತ್ಮಕ ಶೈಕ್ಷಣಿಕ ಹಾಗೂ ಔದ್ಯೋಗಿಕ ಪ್ರಪಂಚಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ತನ್ಮೂಲಕ ಬಲಿಷ್ಠ ಯುವ ಸಮಾಜವನ್ನು ನಿರ್ಮಿಸುವುದು ಈ ಸಂಸ್ಥೆಯ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವ ರವರ ಪ್ರಧಾನ ಆಶಯವಾಗಿದೆ. ಸ್ಪರ್ಧಾತ್ಮಕ ಪ್ರಪಂಚದ ಸವಾಲುಗಳಿಗೆ ಇಲ್ಲವಾಗುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಬಗೆಗೆ ಗುರುತಿಸಿದ ಅಧ್ಯಕ್ಷರು ಮಾದರಿ ಕನ್ನಡ ಶಾಲೆಯೊಂದನ್ನು ಸಂಪೂರ್ಣ ವಸತಿ ಸಹಿತ ಉಚಿತ ಶಿಕ್ಷಣದ ಅಡಿಯಲ್ಲಿ ಪ್ರಾರಂಭಿಸಿದರು. ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವೈಯಕ್ತಿಕ ಖರ್ಚುಗಳನ್ನು ಹೊರತುಪಡಿಸಿ ಯಾವುದೇ ಶುಲ್ಕಗಳು ಇರುವುದಿಲ್ಲ. ಬಾಲ್ಯದಲ್ಲಿಯೇ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಕ್ರಮಬದ್ಧವಾದ ಜ್ಞಾನ ಹಾಗೂ ತಿಳುವಳಿಕೆ ಸಿಕ್ಕಲ್ಲಿ ವಿದ್ಯಾರ್ಥಿಗಳು ದೇಶದ ಆಸ್ತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಅಧ್ಯಕ್ಷರ ಅಭಿಮತ. ಈ ಶಾಲೆಯಲ್ಲಿ ಶೈಕ್ಷಣಿಕ ವಿಚಾರಗಳಿಗೆ ಎಷ್ಟು ಪ್ರಾಧಾನ್ಯತೆ ಇದೆಯೋ ಅಷ್ಟೇ ಪ್ರಾಧಾನ್ಯತೆ ಮಾನವೀಯ ಮೌಲ್ಯಗಳನ್ನು ನಿರ್ಮಿಸುವಲ್ಲಿ, ಬದುಕನ್ನು ಕಟ್ಟಿಕೊಡುವ ಪಠ್ಯಪೂರಕ ಚಟುವಟಿಕೆಗಳಿಗೆ ಇದೆ. ಕೇವಲ ಕಲಿಕೆ ಎಂದರೆ ಅಂಕವಲ್ಲ ಬದುಕನ್ನು ರೂಪಿಸುವ ಭಾಗವಾಗಿ ಈ ಶಿಕ್ಷಣ ಸಂಸ್ಥೆ ನಿರಂತರವಾಗಿ ಹನ್ನೊಂದು ವರ್ಷಗಳಿಂದ ಕಾರ್ಯಾಚರಿಸುತ್ತಿದೆ.

                                               ವಿಶೇಷತೆಗಳು

  • ಸಂಪೂರ್ಣ ಉಚಿತ ವಸತಿ, ಊಟೋಪಚಾರ ಶಿಕ್ಷಣ ವ್ಯವಸ್ಥೆ
  • ಪಾರದರ್ಶಕವಾಗಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ – ಕ್ರೀಡೆ, ಮಲ್ಲಕಂಬ, ಯೋಗ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಿ ಆಯ್ಕೆ ನಡೆಸಲಾಗುತ್ತದೆ.
  • ನುರಿತ, ಅನುಭವಿ ಮತ್ತು ಉತ್ತಮ ಗುಣಮಟ್ಟದ ತಾಂತ್ರಿಕತೆ ಹಾಗೂ ಸ್ಪರ್ಧಾತ್ಮಕತೆಯ ಬಗ್ಗೆ ತಿಳುವಳಿಕೆ ಹೊಂದಿರುವ ಶಿಕ್ಷಕ ವೃಂದ.
  • ಎಲ್ಲಾ ವಿದ್ಯಾರ್ಥಿಗಳನ್ನು ಆಪ್ತತೆಯಿಂದ ಹಾಗೂ ಎಲ್ಲಾ ಶಾಲಾ ದಾಖಲೆಗಳನ್ನು ಜತನದಿಂದ ಕಾಯ್ದುಕೊಳ್ಳುವ ಶಾಲಾ ಕಛೇರಿ ವೃಂದ.
  • ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ಉಚಿತವಾಗಿ ಶಾಸ್ತ್ರೀಯ ಸಂಗೀತ, ಪಕ್ಕವಾದ್ಯ, ನೃತ್ಯಗಳು ಹಾಗೂ ಜನಪದ ಸಂಗೀತ ಮತ್ತು ನೃತ್ಯ ತರಬೇತಿಗಳು.
  • ವೈದ್ಯಕೀಯ, ಇಂಜಿನಿಯರಿಂಗ್ ಉನ್ನತ ಹುದ್ದೆಗಳ ಕನಸು ನನಸಾಗಿಸಲು ಆರನೇ ತರಗತಿಯಿಂದಲೇ ನುರಿತ ಉಪನ್ಯಾಸಕರಿಂದ ಐ.ಐ.ಟಿ. ತರಬೇತಿ.
  • ಭಾಷೆಯ ಹಿಡಿತ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ಕ.ಸಾ.ಪ. ಪರೀಕ್ಷೆಗಳು, ಹಿಂದಿ ಪ್ರಚಾರಸಭಾ ಪರೀಕ್ಷೆಗಳು, ಜಿ.ಕೆ. ಪರೀಕ್ಷೆಗಳು, ಡ್ರಾಯಿಂಗ್ ಗ್ರೇಡ್ ಪರೀಕ್ಷೆಗಳು, ಶಾಂತಿವನ ಟ್ರಸ್ಟ್ ಸ್ಪರ್ಧೆಗಳು ನಡೆಯುತ್ತವೆ.
  • ವಿದ್ಯಾರ್ಥಿಗಳ ಶಿಸ್ತನ್ನು ರೂಪಿಸುವಲ್ಲಿ ಪೂರಕವಾಗಿರುವ ಎನ್.ಸಿ.ಸಿ. (ಆರ್ಮಿ, ನೇವಿ, ಎರ್‌ಫೋರ್ಸ್) ಕೇಂದ್ರಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳು ಇಲ್ಲಿವೆ.
  • ವಿದ್ಯಾರ್ಥಿಗಳ ಶೈಕ್ಷಣಿಕ ಆಗು-ಹೋಗುಗಳನ್ನು ಗುರುತಿಸಲು ಸಮಸ್ಯೆಗಳಿದ್ದಲ್ಲಿ ತಿಳಿದು ಸಲಹೆ ನೀಡಲು “ಮನಸ್ಸು” ಆಪ್ತಸಮಾಲೋಚನ ಕೇಂದ್ರವಿದೆ.
  • ಪೂ. ೯.೦೦ ರಿಂದ ಅ.೪.೦೦ ರವರೆಗೆ ಪ್ರತಿನಿತ್ಯ ತರಗತಿಗಳ ಜೊತೆಗೆ ಶಿಕ್ಷಕರ ಉಪಸ್ಥಿತಿಯೊಂದಿಗೆ ಪ್ರತಿದಿನವೂ ೧.೩೦ ನಿ. ವಿಶೇಷ ಅಧ್ಯಯನ ತರಗತಿಗಳು ನಡೆಯುತ್ತವೆ.
  • ವಿದ್ಯಾರ್ಥಿಗಳ ಬಗ್ಗೆ ಪ್ರೀತಿಯೊಂದಿಗೆ ಕಾಳಜಿ ಹೊಂದಿದ ಉತ್ತಮ ನುರಿತ ವಿದ್ಯಾರ್ಥಿನಿಲಯ ಪಾಲಕರು ಲಭ್ಯರಿರುತ್ತಾರೆ.
  • ವಿದ್ಯಾರ್ಥಿ ನಿಲಯದಲ್ಲಿ ಅತ್ಯುತ್ತಮ ವಸತಿ, ಬಿಸಿ ನೀರು, ಗುಣಮಟ್ಟದ ಊಟ-ಉಪಹಾರದ ಜೊತೆಗೆ ವಿದ್ಯಾರ್ಥಿಗಳ ಕಲಿಕಾ ಆಸಕ್ತಿಗಳನ್ನು ಹೆಚ್ಚಿಸುವ ಚಟುವಟಿಕೆಗಳು ಹಾಗೂ ವಿದ್ಯಾರ್ಥಿ ಕೇಂದ್ರಿತ ಅಧ್ಯಯನ ಸಮಯವಿರುತ್ತದೆ.
  • ಅನಾರೋಗ್ಯ ಸಂಧರ್ಭದಲ್ಲಿ ೨೪ x ೭ ತಜ್ಞ ವೈದ್ಯರಿಂದ ವೈದ್ಯಕೀಯ ವ್ಯವಸ್ಥೆ ಇರುತ್ತದೆ.
ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ

ಕನ್ನಡ ಮಾಧ್ಯಮ ಶಾಲೆಗಳು ದತ್ತು ಯೋಜನೆಯಡಿ (ಶೈಕ್ಷಣಿಕ ಮತ್ತು ಸಾಂಸ್ಕೃತಿಕ) "ಉತ್ತಮ ನಾಳೆಯನ್ನು ರೂಪಿಸುವುದು" ಎಂಬ ಚಿಹ್ನೆಯೊಂದಿಗೆ ನಡೆಯುತ್ತಿವೆ.

ಸಂಸ್ಥೆಯ ಧ್ಯೇಯ ಮತ್ತು ಉದ್ದೇಶಗಳು

"ಮೌಲ್ಯಮಯ ಶಿಕ್ಷಣ ನೀಡುವ, ಯುವಜನರನ್ನು ಸಾಂಸ್ಕೃತಿಕ ಮೌಲ್ಯಗಳು ಮತ್ತು ದೇಶಭಕ್ತಿಯ ಮೇಲೆ ನೆಲಸಿಸುವ ಧ್ಯೇಯವನ್ನು ಶಿಕ್ಷಣ ಸಂಸ್ಥೆಯ ಬಹುಮಾಹಿತಿ ಚಟುವಟಿಕೆಗಳ ಮೂಲಕ ಸಾಧಿಸಲಾಗಿದೆ."

srindhi
ಮುಖ್ಯೋಪಾಧ್ಯಾಯರು

ಶ್ರೀ. ಶ್ರೀನಿಧಿ ಯಳಚಿತ್ತಾಯ
M.A, M.Ed, P.G.D.C.A

“ವಿದ್ಯೆಯೆಂಬುದು ವಿಕ್ರಯದ ವಸ್ತುವಾಗದೇ ವಿದ್ವತ್ತಿನ ಸಂಗ್ರಹವಾಗಬೇಕು. ಭವ್ಯಭಾರತದ ದಿವ್ಯ ಪ್ರಜೆಗಳಲ್ಲಿ ಕಾಲಕ್ಕೆ ತಕ್ಕದಾದ ವಿದ್ಯೆ, ಪೂರಕವಾದ ಬುದ್ಧಿ ಮತ್ತು ಸೂಕ್ತವಾದ ಮನಸ್ಸನ್ನು ಬಾಲ್ಯದಲ್ಲಿಯೇ ಕಟ್ಟುವ ಕೈಂಕರ್ಯಕ್ಕೆ ತೊಡಗಿದರೆ ನಾಡು ಮೆಚ್ಚುವ ಪ್ರತಿಭಾನ್ವಿತರ ಸೃಷ್ಟಿಯಾಗುತ್ತದೆ” ಎಂಬ ಮಾತನ್ನು ಸದಾ ಕಾಲ ಸರ್ವರಲ್ಲಿಯೂ ಹೇಳುತ್ತಾ ಬಂದ ಕನಸುಗಾರ ಡಾ.ಎಂ.ಮೋಹನ ಆಳ್ವ.

ಆಳ್ವಾಸ್ ನುಡಿಸಿರಿಯ ಆಶಯಭಾವದೊಂದಿಗೆ, ಕನ್ನಡವನ್ನು ಕನ್ನಡಿಗರ ಜೀವವಾಗಿಸುವ ಹಿನ್ನೆಲೆಯಲ್ಲಿ, ಕ್ರೀಡಾಸಾಧಕರ ಪ್ರತಿಭೆಗಳಿಗೆ ಪೂರಕ ವಾತಾವರಣ ಸೃಷ್ಟಿಸುವ ಹಿನ್ನೆಲೆಯಲ್ಲಿ, ಸಮಾಜದ ಸರ್ವರಿಗೂ ಸಮಬಾಳು ಎನ್ನುವ ನೆಲೆಯಲ್ಲಿ, ಹಿಂದುಳಿದ ವರ್ಗಗಳ ಉತ್ತೇಜಿಸುವ ನೆಲೆಯಲ್ಲಿ, ರಾಷ್ಟ್ರಸೇವೆ ಮತ್ತು ದೇಶಸೇವೆಯಂತಹ ಕರ್ತವ್ಯದಲ್ಲಿ ತೊಡಗಿಕೊಂಡಿರುವವರ ಗೌರವದ ನೆಲೆಯಲ್ಲಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸುಪ್ತ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಹಿನ್ನೆಲೆಯಲ್ಲಿ, ನಮ್ಮತನದ ಅಥವಾ ಶ್ರೀಸಾಮಾನ್ಯನ ನೆಲೆಗಟ್ಟಿನಲ್ಲಿ ಕನ್ನಡ ಭಾಷೆಗೆ ಸೋಲಾಗದಂತೆ ಕಾಳಜಿಯನ್ನು ಹೊಂದಿದ ಒಬ್ಬ ಆಯುರ್ವೇದ ವೈದ್ಯ ಈ ಕನ್ನಡ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿಕಾಲಕ್ಕೆ ತಕ್ಕ ಕ್ರಮಬದ್ಧ ಮತ್ತು ಪೂರಕವಾದ ಶಿಕ್ಷಣವನ್ನು ಈ ವಿದ್ಯಾಸಂಸ್ಥೆ ನೀಡುತ್ತಾ ಬರುತ್ತಿದೆ.

ಎಲ್ಲೆಡೆಯೂ ಆಂಗ್ಲ ಮಾಧ್ಯಮ ವ್ಯಾಮೋಹ ಹಿನ್ನಲೆಯಲ್ಲಿ ಆಂಗ್ಲ ಮಾಧ್ಯಮವಾಗಿ ಪರಿವರ್ತನೆಗೊಳ್ಳುತ್ತಿರುವ, ಕನ್ನಡ ನೆಲದಲ್ಲೇ ಕನ್ನಡ ಶಾಲೆಗಳು ಅಳಿವಿನಂಚಿನಲ್ಲಿರುವ ಕೊರಗಿನ ನಡುವೆಯೇ ಆಳ್ವಾಸ್ನ ಕನ್ನಡ ಮಾದರಿ ಶಾಲೆಯೊಂದು ರಾಜ್ಯದಲ್ಲೇ “ ಅತ್ಯುತ್ತಮ ಕನ್ನಡ ಮಾಧ್ಯಮ ಶಾಲೆ” ಎಂಬ ಗರಿಮೆಗೆ ಪಾತ್ರವಾಗಿರುವುದು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುತ್ತಿದ್ದು, ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ದೇಶದಲ್ಲಿ ನಡೆಯುವ ತ್ವರಿತಗತಿಯ ಬದಲಾವಣೆಗಳಿಗೆ ಅನುಗುಣವಾಗಿ ಆಧುನಿಕ ವೈಜ್ಞಾನಿಕತೆಯ ಚಿಂತನೆಯೊಂದಿಗೆ ಸಮಯ, ಸೌಂದರ್ಯ ಮತ್ತು ಸೃಜನಶೀಲತೆಗೆ ಹೆಸರಾದ ‘ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ’ ಸಮಾಜಮುಖಿ ಧೋರಣೆಗಳ ಹಿನ್ನಲೆಯಲ್ಲಿ ಉನ್ನತಿಯ ಕಡೆಗೆ ಸಾಗುತ್ತಾ ಬೃಹತ್ ಎನ್ನುವುದರ ಜೊತೆಗೆ ಮಹತ್ ಆಗಿಯೂ ಬೆಳಗುತ್ತಾ ಬಂದಿದೆ.
team-2-shape-2
team-2-shape-1
Our Team

Meet our Experts!

Questions

Questions and answers

faq

What is the Criteria For Selection Under Sports Quota ?

1)Notification for sports quota will be published in newspaper in the month of March and April.
2)Applicants can apply with duely filled bio-data along with attested Xerox copies of their certificates.
3)Selection camp will be held for 20 days at Alva’s Education Foundation.
4)Boarding and coaching facilities will be provided by the school during camp .
5)Selection will be as per the terms of the selection process.
6)Athletics for boys and girls and basketball for girls are only option for students under sports quota.
7)Talented students studying for 8th-10th standard can apply.
8)Students should adhere to the strict rules and regulation of the school.

what are the Facilities For Students Under Sports Quota ?

1)Separate hostel for boys and girls are given along with free food, accommodation and coaching.
2)Well organized playground with 400 mtrs synthetic track.
3)Separate coach for different events. Materials
4)Special care taken even in academics.

For can you slack accountable talk to me?

This vendor is incompetent suite, nor this is not a video game, this is but drink the Kool-aid, yet sorry i was triple muted. Push back synergize productive mindfulness, thought shower, flesh that out note for the previous submit We have to leverage up the messaging

What Happens to my data if I cancel?

This vendor is incompetent suite, nor this is not a video game, this is but drink the Kool-aid, yet sorry i was triple muted. Push back synergize productive mindfulness, thought shower, flesh that out note for the previous submit We have to leverage up the messaging

Contact with Us

Feel free to write us
anytime